*ವರದಿ : ಲೋಹಿತ್ ಹನುಮಂತಪ್ಪ ಮೈಸೂರು.*
ಅನ್ನಪೂರ್ಣಾ ಮತ್ತು ಪ್ರಹ್ಲಾದ್ ಅವರ ಮಗಳಾದ ಅದಿತಿ ಬಿ.ಪ್ರಹ್ಲಾದ್ ಓದು, ಸಂಗೀತ ಎರಡನ್ನೂ ಸಮವಾಗಿ ತೂಗಿಸಿಕೊಂಡು ಹೋಗುತ್ತಾ ಓದಿನಲ್ಲೂ ಮುಂದಿರುವ ಪ್ರತಿಭಾನ್ವಿತ ಕಲಾವಿದೆ..
ಗುರುಗಳಾದ ಕಮಲ್ ಕುಮಾರ್ ಅವರ ಬಳಿ ಪ್ರಾರಂಭಿಕ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ, ವಿನಯ್ ಶರ್ವಾರವರ ಬಳಿ ಸಂಗೀತಾಭ್ಯಾಸ, ಜೊತೆಗೆ ನರಹರಿ ದೀಕ್ಷಿತ್ ಅವರ ಬಳಿ ಸುಗಮ ಸಂಗೀತವನ್ನೂ ಕಲಿತ್ತಿದ್ದಾರೆ.
ಐದು ವರ್ಷಕ್ಕೇ ಕಛೇರಿ ನೀಡಲು ಆರಂಭಿಸಿದ ಅದಿತಿ ಇದುವರೆಗೂ ಐನೂರೈವತ್ತಕ್ಕೂ ಹೆಚ್ಚು ಶಾಸ್ತ್ರೀಯ ಹಾಗೂ ಲಘುಸಂಗೀತದ ಕಛೇರಿಗಳನ್ನು ನೀಡಿದ್ದಾರೆ…
ಶೃಂಗೇರಿಯ ಶಾರದಾಪೀಠ, ಹರಿಹರಪುರ, ಮಂಗಳೂರು, ಚಿಂತಾಮಣಿ, ಕೈವಾರ, ತುಮಕೂರು, ಹಾಸನ, ತಿಪಟೂರು, ನೆಲಮಂಗಲ ಸೇರಿದಂತೆ ಕರ್ನಾಟಕದ ಹಲವೆಡೆ, ಆಂಧ್ರ, ತಮಿಳುನಾಡು, ಬಾಂಬೆ, ವಾಷಿಂಗ್ಟನ್, ಅಟ್ಲಾಂಟ, ನ್ಯೂಜೆರ್ಸಿ, ಷಿಕಾಗೊಗಳಲ್ಲೂ ಸಂಗೀತ ಗಂಧ ಹರಿಸಿದ್ದಾರೆ..
ಸುಮಾರು ಐನೂರಕ್ಕೂ ಹೆಚ್ಚು ಹಾಡುಗಳನ್ನು ನೋಡಿಕೊಳ್ಳದೇ ಹೇಳುವುದು ಅದಿತಿ ಅವರ ಮತ್ತೊಂದು ವಿಶೇಷ.
ಮನೆಯವರ ಬೆಂಬಲದೊಂದಿಗೆ ಮುನ್ನಡೆಯುತ್ತಿರುವ ಅದಿತಿಯವರು ೨೦೨೧ ದಸರಾದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅಕ್ಟೋಬರ್ ೧೨ ರಂದು ಸುಗಮ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟು ಎಲ್ಲರ ಗಮನ ಸೆಳೆದಿದ್ದಾರೆ,
ಅದರಲ್ಲೂ ಮಗಳು ಜಾನಕಿ ಧಾರವಾಹಿಯ ಶೀರ್ಷಿಕೆ ಗೀತೆ ಮನಮುಟ್ಟುವಂತಿತ್ತು..
ಅದಿತಿ ಯವರಿಗೆ ಇದುವರೆಗೂ ಸಾಕಷ್ಟು ಪ್ರಶಸ್ತಿಗಳು ಬಂದಿವೆ. ಆರ್ಯಭಟ ಪ್ರಶಸ್ತಿ, ಬಾಲಪ್ರತಿಭೆ, ಅಸಾಧಾರಣ ಬಾಲ ಪ್ರತಿಭೆ, ಕೆಂಪೇಗೌಡ, ಕಲಾಶ್ರೀ, ಸಂಗೀತ ಯುವ ಸಾಮ್ರಾಟ್, ಬಾಲ ಕಲಾವಿದೆ ಹೀಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಹಲವು ಪ್ರಶಸ್ತಿಗಳು ಸಂದಿವೆ.
ಒಟ್ಟಾರೆ ನಮ್ಮ ಕರುನಾಡಿನಲ್ಲಿ ಇಂತಹ ಎಷ್ಟೋ ಕಲಾವಿದರು ಎಲೆಮರೆಕಾಯಿಯಂತೆ ತಮ್ಮಲ್ಲಿರುವ ಅಗಾಧ ಪ್ರತಿಭೆಯನ್ನು ಅಡಗಿಸಿಕೊಂಡಿದ್ದಾರೆ ಅಂತವರಿಗೆ ಒಂದು ವೇದಿಕೆ ಸಿಗಬೇಕು, ಅವಕಾಶ ಸಿಗಬೇಕು,..
ಇಂತಹ ಕಲಾವಿದರಿಗೆ ಈ ಬಾರಿಯ ದಸರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಕಾಶ ನೀಡಿರುವ ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಮೈಸೂರು ಜಿಲ್ಲಾಡಳಿತದ ಕಾರ್ಯ ಮೆಚ್ಚುವಂತದ್ದು…
Script: Lohith hanumanthappa