ಮಲ್ಕುಂಡಿ ಗ್ರಾಮದಿಂದ ಮೈಸೂರಿಗೆ ಆಗಮಿಸಿದ್ದ ಕೃಷ್ಣೇಗೌಡ ಅವರ ಕಥೆ ಆದರೂ
ಅಂತಿರಾ ಈ ಘಟನೆ ಓದಿ..
ಮಲ್ಕುಂಡಿ ಗ್ರಾಮದಿಂದ ಮೈಸೂರು ನಗರಕ್ಕೆ ಕೃಷ್ಣೇ ಗೌಡ ಅವರು ಕುಟುಂಬ ಸಮೇತ ಖುಷಿ ಖುಷಿಯಾಗಿ ತೆರಳಿ
ಸೆಕ್ಯುರಿಟಿ ಗಾರ್ಡ್ ವೃತ್ತಿಯನ್ನು
ಶ್ರೀ ಬಿಳಿಗಿರಿ ಸೆಕ್ಯುರಿಟಿ ಮತ್ತು ಮ್ಯಾನ್ ಪವರ್ ಏಜೆನ್ಸಿಯಲ್ಲಿ ನಿರ್ವಹಿಸುತ್ತಿದ್ದರು,
ಆದರೆ ಸತತ 4 ತಿಂಗಳಿಂದ ಸೆಕ್ಯುರಿಟಿ ಏಜೆನ್ಸಿ ಹಾಗೂ ಮಾಲೀಕ ನನಗೆ ಸಂಬಳ ನೀಡದೆ ಸತಾಯಿಸುತ್ತಿದ್ದಾರೆ
ಎಂದು ಕೃಷ್ಣೇ ಗೌಡ
ಆರೋಪಮಾಡಿದ್ದಾರೆ
ಸೆಕ್ಯುರಿಟಿ ಏಜೆನ್ಸಿ ಕಚೇರಿ ಮುಂದೆ ಕುಟುಂಬ ಸಮೇತ ಅಲೆದರು ಸೆಕ್ಯುರಿಟಿ ಏಜೆನ್ಸಿ ಮಾಲೀಕ ಕ್ಯಾರೆ ಎನ್ನುತ್ತಿಲ್ಲ ಎಂದು ಅಳಲನ್ನು ತೋಡಿಕೊಂಡಿದ್ದಾರೆ,
ಸೆಕ್ಯುರಿಟಿ ಏಜೆನ್ಸಿ ಮಾಲೀಕ ಮತ್ತು ವ್ಯವಸ್ಥಾಪಕನಿಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ ,
4ತಿಂಗಳುಗಳಿಂದ ಮನೆ ಬಾಡಿಗೆ ಕಟ್ಟಿಲ್ಲ ಮನೆಯ ಮಾಲಿಕ ಹೊರದಬ್ಬಲು ಮುಂದಾಗಿದ್ದಾರೆ,
ನಮ್ಮ ಎಷ್ಟೇ ಸಮಸ್ಯೆಯನ್ನು ಬಿಡಿಬಿಡಿಯಾಗಿ ಹೇಳಿದರು ಏಜೆನ್ಸಿ ಮಾಲೀಕರು ಮತ್ತು ವ್ಯವಸ್ಥಾಪಕರು ಕೇಳುವ ಸ್ಥಿತಿಯಲ್ಲಿಲ್ಲ, ರಾತ್ರಿ ಹಗಲು ದುಡಿದ ಸಂಬಳವನ್ನು ಕೊಡಲು ಮೀನಾ ಮೇಷ ಎಣಿಸುತ್ತಿದ್ದಾರೆ..
ನನ್ನ ಸಂಬಳವನ್ನು ನೀಡದಿದ್ದ ಪಕ್ಷದಲ್ಲಿ ಸೆಕ್ಯುರಿಟಿ ಏಜೆನ್ಸಿ ಕಚೇರಿ ಮುಂದೆ ವಿಷ ಸೇವಿಸಲು ಮುಂದಾಗಬೇಕಾಗುತ್ತದೆ ಎಂದು ನೋವಿನಿಂದಲೆ ನೊಂದ ಕೃಷ್ಣೇಗೌಡ ಎಚ್ಚರಿಕೆ ನೀಡಿದ್ದಾರೆ.