ನೀರವ್ ಮೋದಿ ಗಡಿಪಾರಿಗೆ ಲಂಡನ್ ಗೃಹ ಸಚಿವಾಲಯ ಗ್ರೀನ್​ಸಿಗ್ನಲ್

ನವದೆಹಲಿ: ಭಾರತದಿಂದ ಪರಾರಿಯಾಗಿರುವ ಬಿಲಿಯನೇರ್ ಮತ್ತು ವಜ್ರ ವ್ಯಾಪಾರಿ ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ‌ಬ್ರಿಟನ್‌ನ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಕ್ಲಿಯರ್‌ ಮಾಡಿದ್ದಾರೆ ಎಂದು ಸಿಬಿಐ ವರದಿ ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ನೀರವ್ ಮೋದಿ ಮೇಲೆ 14,000 ಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪವಿದೆ. ಸಾಂಕ್ರಾಮಿಕ ಮತ್ತು ಕಳಪೆ ಭಾರತೀಯ ಜೈಲು ಪರಿಸ್ಥಿತಿಗಳಲ್ಲಿ ತನ್ನ ಮಾನಸಿಕ ಆರೋಗ್ಯವು ಹದಗೆಡುತ್ತದೆ ಎಂಬ ವಾದ ತಳ್ಳಿಹಾಕಿದ ಬ್ರಿಟನ್‌ ನ್ಯಾಯಾಲವಯ ನೀರವ್‌ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ತೀರ್ಪು ನೀಡಿದ ನಂತರ ಈ ಮಾಹಿತಿ ಬಂದಿದೆ.

ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವುದು ಮಾನವ ಹಕ್ಕುಗಳಿಗೆ ಅನುಸಾರವಾಗಿದೆ ಎಂದು ನನಗೆ ತೃಪ್ತಿ ಇದೆ” ಎಂದು ಬ್ರಿಟನ್‌ ಜಿಲ್ಲಾ ನ್ಯಾಯಾಧೀಶ ಸ್ಯಾಮ್ಯುಯೆಲ್ ಗೂಜೀ ಹೇಳಿದ್ದಾರೆ. ಮೇಲ್ಮನವಿ ಸಲ್ಲಿಸುವ ಹಕ್ಕು ಮೋದಿಗೆ ಇದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಹಸ್ತಾಂತರಿಸಿದರೆ ನೀರವ್ ಮೋದಿಗೆ ನ್ಯಾಯ ದೊರೆಯುವುದಿಲ್ಲ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ” ಎಂದು ಬ್ರಿಟನ್‌ ನ್ಯಾಯಾಧೀಶರು ಹೇಳಿದ್ದರು.

ಭಾರತದಲ್ಲಿ ಆಭರಣ ವ್ಯಾಪಾರಿ ವಿಚಾರಣೆಯನ್ನು ಎದುರಿಸಬೇಕಾಗಿರುವ ಪ್ರಕರಣವು ಪ್ರಬಲವಾಗಿದೆ ಎಂದು ಅವರು ಭಾವಿಸಿದ್ದಾರೆ ಎಂದು ಸುದ್ದಿ ವರದಿಗಳು ತಿಳಿಸಿವೆ. ಹಸ್ತಾಂತರ ವಾರಂಟ್‌ನಲ್ಲಿ ನೀರವ್ ಮೋದಿಯನ್ನು ಲಂಡನ್‌ನ ಮೆಟ್ರೋ ನಿಲ್ದಾಣದಿಂದ 2019 ರಲ್ಲಿ ಬಂಧಿಸಲಾಗಿತ್ತು.

Leave a Reply

Your email address will not be published. Required fields are marked *

You cannot copy content of this page