ಕರ್ನಾಟಕದಲ್ಲಿ ಜೂನ್ ೧೪ ರವರೆಗೆ ಲಾಕ್ ಡೌನ್ ವಿಸ್ತರಣೆ ಮುಖ್ಯಮಂತ್ರಿ ಯಡಿಯೂರಪ್ಪ ರಿಂದ ಆದೇಶ

ಕೋವಿಡ್ ಸಾಂಕ್ರಾಮಿಕ ಸೋಂಕನ್ನು ಸಂಪೂರ್ಣ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಸೂಕ್ತವೆಂದು ಪರಿಗಣಿಸಿ ಈ ಹಿಂದೆ ಜೂನ್ 7 ರವರೆಗೆ ಜಾರಿಗೊಳಿಸಲಾಗಿತ್ತು .

ಪ್ರಸ್ತುತ ಕೋವಿಡ್ ಸೋಂಕಿನ ಪ್ರಮಾಣ ಇಳಿಮುಖವಾಗಿದ್ದರೂ ಕೂಡ , ವೈರಾಣು ಹರಡುವಿಕೆ ಮುಂದುವರೆದಿದೆ .

ಆರೋಗ್ಯ ಪರಿಣಿತರ ಸಲಹೆಯ ಮೇರೆಗೆ ಮುಂದುವರೆಸೋದು ಸೂಕ್ತ ಎಂದು ಪರಿಗಣಿಸಿ 14-06-2021ರವರೆಗೆ ಒಂದು ವಾರ ಕಾಲ ವಿಸ್ತರಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ .

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಂತ ಅವರು , 500 ಕೋಟಿ ವಿಶೇಷ ಎರಡನೇ ಪ್ಯಾಕೇಜ್ ಇಂದು ಘೋಷಣೆ ಮಾಡಲಾಗುತ್ತಿದೆ . 7-06-2021ರಿಂದ ಶೇ .30 ರಷ್ಟು ಕೋವಿಡ್ ವರ್ತನೆ ಪಾಲಿಸಿ ತೆರೆಯಲು ಅನುಮತಿಸಲಾಗಿದೆ . ಕೋವಿಡ್ ಪ್ಯಾಕೇಜ್ -2 .. ಪವರ್ ಲೂಮ್ ನೇಕಾರರಿಗೆ ಇಬ್ಬರು ಕೆಲಸಗಾರರಿಗೆ ಮೂರದಂತೆ ಮೂರು ಸಾವಿರ ಪರಿಹಾರ ನೀಡಲಾಗುತ್ತದೆ . ಚಲನ ಚಿತ್ರ , ದೂರು ದರ್ಶನ ಮಾಧ್ಯಮಿತ್ರಿಗೆ 3 ಸಾವಿರ ನೀಡಲಾಗುತ್ತದೆ . ಮೀನುಗಾರರಿಗೆ ಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿಸಿದಂತ ಮೀನುಗಾರರಿಗೆ ತಲಾ 3 ಸಾವಿರ ನೀಡಲಾಗುತ್ತದೆ ಎಂದರು .

ಇನ್ ಲ್ಯಾಂಡ್ ದೋಣಿ ಮಾಲೀಕರಿಗೆ ಮೂರು ಸಾವಿರ ಕೂಡ ನೀಡಲಾಗುತ್ತದೆ ಎಂದರು . ಮುಜುರಾಯಿ ದೇವಸ್ಥಾನದ ಅರ್ಚಕರು , ಸಿಬ್ಬಂದಿಗಳಿಗೆ ಸಿ ವರ್ಗದ ದೇವಸ್ಥಾನದಲ್ಲಿ ಕೆಲಸ ಮಾಡುವಂತ ತಲಾ ಮೂರು ಸಾವಿರ ನೀಡಲು ನಿರ್ಧಾರ ಮಾಡಲಾಗಿದೆ . ಮಸೀದಿಯಲ್ಲಿನ ಪೇಜಿಸಿಮೋಗಳಿಗೂ ತಲಾ ಮೂರು ಸಾವಿರ ಕೊಡಲು ನಿರ್ಧಾರ ಮಾಡಲಾಗಿದೆ,

ಆಶಾ ಕಾರ್ಯಕರ್ತರು ಕೂಡ ಕೊರೋನಾ ನಿಯಂತ್ರಣದಲ್ಲಿ ಕೆಲಸ ಮಾಡುತ್ತಿದ್ದಾರೆ . ಅವರಿಗೂ ಮೂರು ಸಾವಿರ ನೀಡಲಾಗುತ್ತದೆ .

ಇದರಿಂದ 42574 ಕಾರ್ಯಕರ್ತೆಯರಿಗೆ ಸಹಾಯ ಆಗಲಿದೆ . ಅಂಗನವಾಡಿ ಕಾರ್ಯಕರ್ತೆಯರಿಗೆ 2 ಸಾವಿರ ನೀಡಲಾಗುತ್ತದೆ ,
ಎಲ್ಲಾ ಶಾಲೆಗಳು ಮುಚ್ಚಿದ್ದರೂ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ . ಅನುಧಾನ ರಹಿತ ಪ್ರಾಥಮಿಕ , ಪ್ರೌಢ ಶಾಲಾ ಶಿಕ್ಷಕರಿಗೆ 5 ಸಾವಿರ ಪರಿಹಾರ . ನ್ಯಾಯವಾದಿಗಳ ಕಲ್ಯಾಣ ನಿಧಿಗೆ 5 ಕೋಟಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You cannot copy content of this page