ಮಾರ್ಚ್ 19 ಮತ್ತು 20 ರಂದು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ , “ ವಿ , ಪ್ರಭಾಕರ್ ಸ್ಮರಣಾರ್ಥ ಲೆಜೆಂಡ್ಸ್ T10 ಕ್ರಿಕೆಟ್ ಪಂದ್ಯಾವಳಿ

ಮೈಸೂರಿನ ನವೋದಯ ಕ್ರಿಕೆಟ್ ಕ್ಲಬ್ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ಸಹಯೋಗದಲ್ಲಿ , ಮಾಚ್ ೯ 19 ಮತ್ತು 20 ರಂದು ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ , “ ವಿ , ಪ್ರಭಾಕರ್ ಸ್ಮರಣಾರ್ಥ ಲೆಜೆಂಡ್ಸ್ T10 ಕ್ರಿಕೆಟ್ ಪಂದ್ಯಾವಳಿ ” ಆಯೋಜಿಸಲಾಗಿದೆ ಎಂದು
ನವೋದಯ ಕ್ರಿಕೆಟ್ ಕ್ಲಬ್ ನ ಪದಾಧಿಕಾರಿ ಎಂ.ಆರ್ , ಸುರೇಶ್ ತಿಳಿಸಿದರು

ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ , ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೈಸೂರಿನಲ್ಲಿ ಮೊದಲ ಬಾರಿಗೆ ಈ ರೀತಿಯ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ ಎರಡು ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ರಣಜಿ ಟ್ರೋಫಿ , ಕರ್ನಾಟಕ ರಾಜ್ಯ , ಮೈಸೂರು ವಿಭಾಗ ಮತ್ತು ವಿಶ್ವವಿದ್ಯಾನಿಲಯ ಕ್ರಿಕೆಟ್ ತಂಡಗಳನ್ನು ಪ್ರತಿನಿಧಿಸಿದ 75 ಕ್ಕೂ ಹೆಚ್ಚು . ಹಿರಿಯ ಕ್ರಿಕೆಟಿಗರು ಭಾಗವಹಿಸುತ್ತಿದ್ದಾರೆ .

ಪಂದ್ಯಾವಳಿಯಲ್ಲಿ , ಪ್ರತಿ ತಂಡ 10 ಓವರ್ ಗಳನ್ನು ಆಡಲಿದ್ದು , 3 ಓವರ್ ಗಳ ಪವರ್ -ಪ್ಲೇ ಇರಲಿದೆ .
ಪ್ರತಿ ಬೌಲರ್ 2 ಓವರ್ ಗಿಂತ ಹೆಚ್ಚು , ಬೌಲಿಂಗ್ ಮಾಡಲು ಅವಕಾಶ ಇರುವುದಿಲ್ಲ . ಪಂದ್ಯಾವಳಿಯಲ್ಲಿ ಒಟ್ಟು ಐದು ತಂಡಗಳು ಭಾಗವಹಿಸಲಿದ್ದು , ಲೀಗ್ ಆಧಾರದಲ್ಲಿ, ಪಂದ್ಯಗಳು ನಡೆಯಲಿದೆ . ಪ್ರತಿ ತಂಡ ನಾಲ್ಕು ಪಂದ್ಯಗಳನ್ನು ಆಡಲಿದ್ದು , ಅಗ್ರ ಸ್ಥಾನ ಪಡೆಯಲಿರುವ ಎರಡು ತಂಡಗಳು ಮಾಚ್ 20 ರಂದು ಮಧ್ಯಾಹ್ನ 3 ಗಂಟೆಗೆ ನಡೆಯುವ ಫೈನಲ್ ನಲ್ಲಿ ಆಡಲು ಅರ್ಹತೆ ಪಡೆಯಲಿವೆ.

ಮಾರ್ಚ್ 19 ರಂದು ಬೆಳಗೆ , 7.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ , ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ . ಹೇಮಂತ್ ಕುಮಾರ್ ಅವರು ಪಂದ್ಯಾವಳಿಯನ್ನು ಉದ್ಘಾಟಿಸಲಿದ್ದಾರೆ .

ಪಂದ್ಯಾವಳಿಯ ಪ್ರಶಸ್ತಿ ಪ್ರದಾನ ಸಮಾರಂಭ ಮಾರ್ಚ್ 20 ರಂದು ಸಂಜೆ 4.30 ಕ್ಕೆ ನಡೆಯಲಿದ್ದು , ರಣಜಿ ಮಾಜಿ ಕ್ರಿಕೆಟಿಗರಾದ ಎಸ್ . ವಿಜಯ್ ಪ್ರಕಾಶ್ , ನವೋದಯ ಕ್ರಿಕೆಟ್ ಕ್ಲಬ್ ಅಧ್ಯಕ್ಷರಾದ ಕೆ.ಆರ್‌ . ಮೋಹನ್ ಕುಮಾರ್ , ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪಿ . ಕೃಷ್ಣಯ್ಯ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಮತ್ತು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ , ಕೋವಿಡ್ -19 ನಂತರದಲ್ಲಿ ಕ್ರಿಕೆಟ್ ಚಟುವಟಿಕೆಗಳು ನಿಧಾನಗತಿಯಲ್ಲಿ ಸಾಗುತ್ತಿದೆ . ನಮ್ಮ ಸಹ ಕ್ರಿಕೆಟಿಗರು ತಮ್ಮನ್ನು ಹಿಟ್ ಆಗಿ ಇರಿಸಿಕೊಳ್ಳುವ ಹಾಗೂ ಕ್ರಿಕೆಟ್ ನ ಬೆಳವಣಿಗೆಗೆ ಕೊಡುಗೆ ನೀಡುವ ಮೂಲಕ ಯುವಕರಿಗೆ ಸ್ಫೂರ್ತಿ ನೀಡಬೇಕೆಂದು ಬಯಸುತ್ತೇವೆ ಎಂದ ಅವರು , ಪಂದ್ಯಾವಳಿಯಲ್ಲಿ , ಪಾಲ್ಗೊಳ್ಳಳು ಹೊರಗಿನಿಂದ ಬರುವವರಿಗೆ ಉಚಿತ ವಸತಿ ವ್ಯವಸ್ಥೆ ಮಾಡಲಾಗಿದೆ .
ಇದರ ಹೊರತಾಗಿ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ಯಾವುದೇ ಪ್ರವೇಶ ದರವನ್ನು ನಿಗದಿ ಮಾಡಿಲ್ಲ ಎಂದು ತಿಳಿಸಿದರು.

ಇನ್ನೂ ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕರಾದ ಪಿ . ಕೃಷ್ಣಯ್ಯ ಮಾತನಾಡಿ , ಎಲ್ಲಾ ಆಟಗಾರರು ಪಂದ್ಯಾವಳಿಯನ್ನು ಗಂಭೀರವಾಗಿ ಪರಿಗಣಿಸಿದ್ದು , ಎಲ್ಲಾ ಆಟಗಾರರು ಸಕ್ರಿಯವಾಗಿ ಪಾಲ್ಗೊಳ್ಳುತ್ತಿರುವುದನ್ನ ನಾವು ನೋಡಬಹುದು .

1980 ರಿಂದ ಇಲ್ಲಿಯವರೆಗೆ ಕ್ರಿಕೆಟ್ ಆಡಿದ ಕ್ರಿಕೆಟಿಗರಗಳಿಗೆ ಈ ಪಂದ್ಯಾವಳಿ ಹಳೆಯ ಸಂಪರ್ಕವಾಗಿದೆ . ಪಂದ್ಯಾವಳಿಯಲ್ಲಿ ಭಾಗವಹಿಸುವ ಸಲುವಾಗಿ ಆಟಗಾರರು ನಿರಂತರ ಅಭ್ಯಾಸ ಮಾಡಿದ್ದು , ಆ ಮೂಲಕ ತಮ್ಮನ್ನು ಫಿಟ್ ಆಗಿ ಇಟ್ಟುಕೊಂಡಿದ್ದಾರೆ .
ಎಲ್ಲಕ್ಕಿಂತ ಮುಖ್ಯವಾಗಿ ಪ್ರಸ್ತುತ ಸಂದರ್ಭದಲ್ಲಿ ಆಟಗಾರರ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ಈ ಪಂದ್ಯಾವಳಿ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ , ನವೋದಯ ಕ್ರಿಕೆಟ್ ಕಬ್ ನ ಕಾರ್ಯದರ್ಶಿ ಶ್ರೀನಿವಾಸ್ ಪ್ರಸಾದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು..

Leave a Reply

Your email address will not be published. Required fields are marked *

You cannot copy content of this page