ಸೇವಾಶ್ರಮ ಮಕ್ಕಳ ಜೊತೆವಸಿಷ್ಠ ಸಿಂಹ ಜನ್ಮದಿನಆಚರಿಸಿದ ವಸಿಷ್ಠ ಸಿಂಹ ಸ್ನೇಹ ಬಳಗ

ವಿಜಯನಗರದಲ್ಲಿರುವ
ಸವಿ ನೆನಪು ಫೌಂಡೇಶನ್ ಸೇವಾಶ್ರಮ ದಲ್ಲಿ ಕಂಚಿನ ಕಂಠದ ನಾಯಕ ನಟ ವಸಿಷ್ಟ ಸಿಂಹ ರವರ ಜನ್ಮ ದಿನದ ಪ್ರಯುಕ್ತ ಸೇವಾ ಶ್ರಮ ಮಕ್ಕಳ ಜೊತೆ ವಸಿಷ್ಠ ಸಿಂಹ ಸ್ನೇಹ ಬಳಗದ ಸದಸ್ಯರು ಕೇಕ್ ಕಟ್ ಮಾಡಿ ನಂತರ ಮಕ್ಕಳಿಗೆ ಉಪಹಾರ ನೀಡಿ ನೆಚ್ಚಿನ ನಟ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು

ಬಲಿಕ ಮಾತನಾಡಿದ ವಸಿಷ್ಠ ಸಿಂಹ ಸ್ನೇಹ ಬಳಗದ ಅಧ್ಯಕ್ಷ ಬೈರತಿ ಲಿಂಗರಾಜು
ಮೈಸೂರು ಕಲಾವಿದರ ತವರೂರು ಕಂಚಿನ ಕಂಠದ ಗಾಯಕ ವಶಿಷ್ಟ ಸಿಂಹ ರವರು ಮೈಸೂರಿನವರು ಎನ್ನುವುದು ನಮಗೆ ಹೆಮ್ಮೆಯ ವಿಚಾರ, ವಸಿಷ್ಟ ಸಿಂಹ ರವರು ಮಹಾಮಾರಿ ಕರೋನ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದ ಕಲಾವಿದರ ಕುಟುಂಬಕ್ಕೆ ಆಟೋ ಚಾಲಕರು ಕೂಲಿ ಕಾರ್ಮಿಕರಿಗೆ ನೆರವಾಗಿದ್ದಾರೆ, ಪ್ರತಿ ವರ್ಷದಂತೆ ಈ ವರ್ಷವೂ ಸಹ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸೇವಾ ಶ್ರಮ ಮಕ್ಕಳ ಜೊತೆ ಸ್ನೇಹಿತರಲ್ಲ ಆಚರಿಸುತ್ತಿದ್ದೇವೆ , ಎಂದು ಹೇಳಿದರು

ಮಾನವ ಹಕ್ಕುಗಳ ರಕ್ಷಣೆ ಹಾಗೂ ಭ್ರಷ್ಟಾಚಾರ ನಿರ್ಮೂಲ ಸೇವಾ ಸಮಿತಿಯ ಜಿಲ್ಲಾಧ್ಯಕ್ಷರಾದ ಆರ್ ವಿನೋದ್ ಮಾತನಾಡಿ
ವಶಿಷ್ಟ ಸಿಂಹ ರವರ ಹುಟ್ಟು ಹಬ್ಬವನ್ನು
ಯಾವುದೇ ತರಹದ ಆಡಂಬರವಿಲ್ಲದೆ ಇಂತಹ ಮಕ್ಕಳ ಜೊತೆ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೆಯ,
ಚಿತ್ರನಟರ ಅಭಿಮಾನಿಗಳು ದುಂದುವೆಚ್ಚ ಮಾಡಿ ಜನ್ಮ ದಿನಾಚರಣೆ ಆಚರಿಸುವ ಬದಲು ಸಮಾಜಕ್ಕೆ ಯಾವುದಾದರೂ ಸೇವಾ ಮನೋಭಾವ ಇಟ್ಟುಕೊಂಡು ಸೇವೆಯನ್ನೇ ಗುರಿ ಮಾಡಿಕೊಂಡು ಕೆಲಸ ಮಾಡಿದರೆ ನಿಜಕ್ಕೂ ಅದು ಆ ನಟರಿಗೂ ಮತ್ತು ಅವರ ಅಭಿಮಾನಿಗಳಿಗೂ ಕೀರ್ತಿ ತಂದುಕೊಡುತ್ತದೆ

ಇದೇ ಸಂದರ್ಭದಲ್ಲಿ
ಮಾನವ ಹಕ್ಕುಗಳ ರಕ್ಷಣೆ ಹಾಗೂ ಬ್ರಷ್ಟಾಚಾರ ನಿರ್ಮೂಲ ಸೇವಾ ಸಮಿತಿ ಮೈಸೂರು ಜಿಲ್ಲಾಧ್ಯಕ್ಷ ಆರ್ ವಿನೋದ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಆರ್ ಯಶೋಧ, ಚೆಲುವರಾಜ್ ನಾಯಕ್, ಮಹಾನ್ ಶ್ರೇಯಸ್, ಮೋಹನ್ ಕುಮಾರ್, ಮೋಹನ್, ರಕ್ಷು ಆಚಾರ್, ವಿಶಾಲ್, ಸಾಯಿ ಕೃಷ್ಣ, ಕೌಶಿಕ್, ಹಾಗೂ ಇನ್ನಿತರ ಸ್ನೇಹಿತರು ಹಾಗೂ ಅಭಿಮಾನಿಗಳು ಹಾಜರಿದ್ದರು

Leave a Reply

Your email address will not be published. Required fields are marked *

You cannot copy content of this page