ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ವಿಶ್ವ ದರ್ಜೆಯ ಸೇವೆ ನೀಡುವ ಡಿಆರ್‌ಎಂ ಡಯಾಗ್ನಸ್ಟಿಕ್ಸ್ ಕೇಂದ್ರ ಜನವರಿ ೨೦ ಕ್ಕೆ ಚಾಲನೆ

ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಗೋಕುಲಂನ ಕೆಆರ್‌ಎಸ್ ರಸ್ತೆಯ ಬಳಿ ಅತ್ಯಾಧುನಿಕ ಹಾಗೂ ವಿಶ್ವ ದರ್ಜೆಯ ಸೇವೆ ನೀಡುವ ಡಿಆರ್‌ಎಂ ಡಯಾಗ್ನಸ್ಟಿಕ್ಸ್ ಕೇಂದ್ರ ಸದ್ಯದಲ್ಲಿಯ ಆರಂಭವಾಗಲಿದೆ . ಈ ವಿನೂತನ ಸೇವೆಗೆ ಜ . ೨೦ ರಂದು ಮೈಸೂರಿನ ಜನಪ್ರತಿನಿಧಿಗಳು , ನಾನಾ ಆಸ್ಪತ್ರೆಗಳ ತಜ್ಞವೈದ್ಯರು ಸೇರಿದಂತೆ ಇನ್ನಿತರ ಗಣ್ಯರು ಚಾಲನೆ ನೀಡುವರು ಎಂದು ಡಿ ಆರ್ ಎಂ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ , ಮತ್ತು ವೈದ್ಯಕೀಯ ನಿರ್ದೇಶಕರಾದ ವೇಣುಗೋಪಾಲ್ ತಿಳಿಸಿದರು

ಡಿಆರ್ ಎಂ ಆಸ್ಪತ್ರೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು
ಮೈಸೂರು ಹಾಗೂ ಸುತ್ತಲಿನ ಜಿಲ್ಲೆಗಳ ಆಸ್ಪತ್ರೆಗಳು ದೂರದ ಹೊಸ ದಿಲ್ಲಿಯಂತಹ ಕೇಂದ್ರಗಳಿಗೆ ಮಾದರಿಗಳನ್ನು ಕಳುಹಿಸಿ ೧೦ ರಿಂದ ೧೫ ದಿನಗಳ ನಂತರ ವರದಿಗಳನ್ನು ಪಡೆದು ಚಿಕಿತ್ಸೆ ನೀಡಬೇಕಾದ ಸಂದಿಗ್ಧತೆ ಸದ್ಯದಲ್ಲೆ ದೂರವಾಗಲಿದೆ .
ಮೈಸೂರು ಹಾಗೂ ಸುತ್ತಲ ಜಿಲ್ಲೆಗಳ ಆಸ್ಪತ್ರೆಗಳಿಗೆ ಬರುವ ರೋಗಿಗಳ ಹಿಮ್ಮುನೂ ಹಿಸ್ಕೊ ಕೆಮಿಸ್ಟ್ರಿ ಟ್ಯೂಮರ್ ಮಾಕರ ಇಮ್ಯುನೊ ಹ್ಯಾಸ್ ಸಿ ಪರೀಕ್ಷೆಗಳನ್ನು ಮಾಡಿಸಲು ದೂರದ ಹೊಸದಿಲ್ಲಿ ಹಾಗೂ ಇನ್ನಿತರ ಕೇಂದ್ರಗಳಿಗೆ ಕಳುಹಿಸಿ ಅದರ ವರದಿ ಪಡೆಯಲು ಕನಿಷ್ಠ ೧೦ ರಿಂದ ೧೫ ದಿನ ಕಾಯಬೇಕಾದ ಸನ್ನಿವೇಶವಿದೆ . ಈ ಸನ್ನಿವೇಶವನ್ನು ದೂರಗೊಳಿಸಲು ಹಾಗೂ ಯಾವುದೇ ರೋಗಕ್ಕೆ ಸಂಬಂಧಿಸಿದಂತೆ ಕರಾರುವಕ್ಕಾದ ವರದಿಗಳನ್ನು ಡಿಆರ್‌ಎಂ ಡಯಾಗ್ನಸ್ಟಿಕ್ಸ್ ಕೇಂದ್ರ ನೀಡಲಿದೆ ಎಂದರು .

ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ರೋಗ ಪತ್ತೆ ಮಾಡುವ ವ್ಯವಸ್ಥೆ ಇದಾಗಿದೆ . ವಿಶ್ವದರ್ಜೆಯ ಯಂತ್ರೋಪಕರಣ ಅಳವಡಿಸಲಾಗಿದೆ . ಮಾತ್ರವಲ್ಲದೇ ಇಲ್ಲಿ ವಿಶ್ವದರ್ಜೆಯ ರೋಗಪತ್ತೆ ಶಾಸ್ತ್ರಜ್ಞರು ಕೆಲಸ ಮಾಡಲಿದ್ದಾರೆ .

ಈ ಕೇಂದ್ರದಲ್ಲಿ ಕ್ಯಾನ್ಸರ್‌ನಂತ ರೋಗಿಗಳಿಗೆ ಸಂಬಂಧಿಸಿದ ವರದಿಗಳು ೧೦ ರಿಂದ ೧೫ ದಿನಕ್ಕೆ ಬದಲಾಗಿ ಕೇವಲ ಒಂದೇ ದಿನದಲ್ಲಿ ಲಭ್ಯವಾಗುವುದರಿಂದ ರೋಗದ ಪ್ರಮಾಣ ನಂತರದ ಹಂತ ತಲುವುವುದನ್ನು ನಿಯಂತ್ರಿಸಬಹುದಾಗಿದೆ .

ವರದಿ ಪಡೆಯುವಲ್ಲಿ ಆಗುವ ವಿಳಂಬದಿಂದ ಕೆಲವೊಮ್ಮೆ ಉಂಟಾಗುವ ಸಾವುನೋವುಗಳು ಇದರಿಂದ ತಪ್ಪಲಿದೆ . ಕೇಂದ್ರದಲ್ಲಿ ಕೂಡಲೆ ಪರೀಕ್ಷೆ ನಡೆಸಿ ಬೇಗ ವರದಿ ನೀಡುವುದರಿಂದ ರೋಗದ ತೀವ್ರತೆಯನ್ನು ತಪ್ಪಿಸಬಹುದಾಗಿದೆ . ಮೈಸೂರಿನ ಸುತ್ತಲ ಐದು ಜಿಲ್ಲೆಗಳ ಆಸ್ಪತ್ರೆಗಳಿಗೆ ಈ ಸೇವೆ ದೊರೆಯುವುದಲ್ಲದೇ , ಈ ಜಿಲ್ಲೆಗಳಂತೆ ಕೆಲವೊಂದು ಪರೀಕ್ಷೆಗೆ ಹೊಸದಿಲ್ಲಿಯಂತಹ ಕೇಂದ್ರಗಳನ್ನು ಆಶ್ರಯಿಸಿರುವ ಹುಬ್ಬಳ್ಳಿ , ಧಾರವವಾಡ , ಬಳ್ಳಾರಿಯ ಜಿಲ್ಲೆಗೆಗೂ ಸೇವೆ ನೀಡಲಾಗುವುದು ಎಂದು ತಿಳಿಸಿದರು .

ಸುದ್ದಿಗೋಷ್ಟಿಯಲ್ಲಿ, ಡಿ.ಟಿ. ಪುಕಾಶ್ , ವೈದ್ಯಕೀಯ ನಿರ್ದೇಶಕರಾದ ಡಾ ವೇಣುಗೋಪಾಲ್‌ , ಆಸ್ಪತ್ರೆ ಸೌಲಭ್ಯ ನಿರ್ದೇಶಕ ಡಾ . ಪ್ರಾಶಾಂತ್ , ಡಾ . ಸಂತೋಷ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

You cannot copy content of this page