LOHITH HANUMANTHAPPA
ಮಂಡ್ಯಜಿಲ್ಲೆ,ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿಂದು ವಿಶ್ವ ಅಂಗವಿಕರ ದಿನಾಚರಣೆ ಪ್ರಯುಕ್ತ ಬನ್ನೂರಿನ ಸಮಾಜ ಸೇವಕರು,ಕೊಡುಗೈ ದಾನಿಗಳು,ನಿರಂತರವಾಗಿ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಂತಹ ಬನ್ನೂರು ಪರಿಸರ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ.ಕೆ.ಮಹೇಂದ್ರ ಸಿಂಗ್ ಕಾಳಪ್ಪ ನವರು ಅರಕೆರೆ ಗ್ರಾಮದ ಆರ್ಥಿಕವಾಗಿ ಹಿಂದುಳಿದ ಕಡು ಬಡ ಕುಟುಂಬದ ಅಂಗವಿಕಲರಾದ ಕಿರಣ್ ರವರಿಗೆ ಮತ್ತು ಕೊಡುಗಳ್ಳಿಯ ಮಹಾದೇವು ರವರಿ ಹೊಸ ಬಟ್ಟೆ,ಧನ ಸಹಾಯ,ಅಂಗವಿಕಲರ ಪರಿಕರಗಳನ್ನು ವಿತರಣೆ ಮಾಡಿದರು.
ಇಂದು ವಿಶ್ವ ಅಂಗವಿಕರ ದಿನಾಚರಣೆ ಪ್ರಯುಕ್ತ ಕಿರಣ್ ಮತ್ತು ಕೊಡುಗಳ್ಳಿ ಮಹದೇವ ರವರ ಕಷ್ಟವನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದರಿಂದ ಅವರಿಗೆ ಒಳ್ಳೆಯದಾಗಲಿ ಎಂಬ ನಿಟ್ಟಿನಲ್ಲಿ ಮಹೇಂದ್ರ ಸಿಂಗ್ ಕಾಳಪ್ಪ ನವರು ಅವರಿಗೆ ಸಹಾಯ ಮಾಡಿದ್ದಾರೆ ಕಿರಣ್ ರವರು 6ನೇ ವಯಸ್ಸಿನಲ್ಲೇ ಅಪಘಾತದಲ್ಲಿ ತಮ್ಮ ಕಾಲನ್ನು ಕಳೆದು ಕೊಂಡರು ಆಗ ಅವರಿಗೆ ಯಾರು ಸಹಾಯಕ್ಕೆ ಬರಲಿಲ್ಲ ಅವರ ಮನೆಯ ಪರಿಸ್ಥಿತಿಯನ್ನು ಮನಗಂಡ ಕಾಳಪ್ಪ ನವರು ಸಹಾಯ ಮಾಡಿದ್ದಾರೆ.ಇನ್ನು ಮಹಾದೇವು ರವರು ಚಿಕ್ಕವಯಸ್ಸಿನಲ್ಲೇ ಕಾಲುಗಳ ಸ್ವಾಧೀನ ಕಳೆದುಕೊಂಡು ದೇವಸ್ಥಾನಗಳಿಗೆ ತೆರಲ್ಲಿ ಭಿಕ್ಷಾಟಣೆ ಮಾಡುತಿದ್ದರು.ಇಂತವರಿಗೆ ಕಳೆದ 5ವರ್ಷಗಳಿಂದ ಕಾಳಪ್ಪ ನವರು ಸಹಾಯಮಾಡಿ ಕೊಂಡು ಬರುತಿದ್ದಾರೇ.
ಬಳಿಕ ಮಾತನಾಡಿದ ಕಾಳಪ್ಪ ನವರು ಇಂದು ವಿಶ್ವ ಅಂಗವಿಕರ ದಿನಾಚರಣೆ ಪ್ರಯುಕ್ತ ನಾನು ಕಿರಣ್ ಮತ್ತು ಕೊಡುಗಳ್ಳಿ ಮಹಾದೇವು ರವರನ್ನು ಗುರುತಿಸಿ ಅವರಿಗೆ ಅರ್ಥಿಕವಾಗಿ ಬೇಕಾದ್ದಂತಹ ಪರಿಕರಗಳು,ಬಟ್ಟೆ,ಅವರ ಜೀವನೋಪಾಯಕ್ಕೆ ಬೇಕಾಗುವಂತಹ ಆರ್ಥಿಕ ಧನ ಸಹಾಯವನ್ನು ಮಾಡಿದ್ದೇನೆ ಭಗವಂತ್ ಇವರಿಗೆ ಇನ್ನು ಹೆಚ್ಚಿನ ರೀತಿಯಲ್ಲಿ ಆರ್ಥಿಕ ನೆರವನ್ನು ಕರುಣಿಸಲಿ ನನ್ನತೆ ಇನ್ನು ಅನೇಕರು ಇಂತಹ ಕುಟುಂಬಗಳಿಗೆ ಸಹಾಯವನ್ನೂ ಮಾಡಲಿ ಇವರ ಕುಟುಂಬ
ಪರಿಸ್ಥಿತಿಯನ್ನು ಕಂಡು ನಾನು ಇವರಿಗೆ ಸಹಾಯ ಮಾಡುತ್ತಿದ್ದೇನೆ ಎಂದರು.
ಇನ್ನು ಈ ವೇಳೆ ಕಿರಣ್ ನ ತಂದೆ ದೇವೇಗೌಡ,ದೇವಮ್ಮ,ರಮೇಶ್ ಸಿರಾವಿ, ರವರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು