ಲೋಹಿತ್ ಹನುಮಂತಪ್ಪ,
ಬೆಂಗಳೂರು: ಶಕ್ತಿ ದೇವತೆಗಳಲ್ಲಿ ಒಬ್ಬಳಾದ ,ಕಾಟೇರಮ್ಮ ಭಕ್ತರ ಸಂಕಷ್ಟಗಳ ಪರಿಹರಿಸುವ ಸಲುವಾಗಿವೆ ಜನ್ಮತಾಳಿದವಳು , ಅದರಂತೆ
ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನಲ್ಲಿರುವ ಕಂಬಳಿಪುರ ಗ್ರಾಮದಲ್ಲಿರುವ ಕಾಟೇರಮ್ಮ ದೇವಸ್ಥಾನಕ್ಕೆ ರಾಜ್ಯ ಮಾತ್ರವಲ್ಲದೆ ವಿವಿಧ ರಾಜ್ಯಗಳಿಂದ ಭೇಟಿ ಮಾಡಿ ದೇವಿ ಆಶೀರ್ವಾದ ಪಡೆದು ತಮಗೆ ಬಂದಿರುವ ಕಷ್ಟಗಳನ್ನು ದೇವಿ ಹತ್ತಿರ ಹೇಳಿಕೊಂಡು ಎಲ್ಲಾ ಕಷ್ಟಗಳಿಗೂ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.
ಈ ಪುಣ್ಯಕ್ಷೇತ್ರದಲ್ಲಿ ಸುಮಾರು 350 ವರ್ಷಗಳ ಇತಿಹಾಸವಿರುವ ಜೋಡಿ ಆಲದ ಮರವಿದ್ದು ಈ ಜೋಡಿ ಆಲದ ಮರದ ಕೆಳಗಡೆ ನವ ದೇವತೆಗಳ ಸ್ಥಾಪನೆಯಾಗಿದ್ದು ಈ ಆಲದ ಮರದ ಸುತ್ತ 48 ಅಥವಾ 108 ಸುತ್ತು ಸುತ್ತುವುದರಿಂದ ತಮಗೆ ಬಂದಿರುವಂತಹ ಕಷ್ಟ, ವಿಘ್ನ ಮಾಟ, ಮಂತ್ರ ಇನ್ನಿತರ ಸಮಸ್ಯೆಗಳೆಲ್ಲ ಪರಿಹಾರವಾಗುತ್ತದೆ ಎಂದು ಕಂಬಳಿಪುರ ಕಾಟೇರಮ್ಮ ದೇವಸ್ಥಾನ ಭೇಟಿ ನೀಡುವ ಭಕ್ತಾದಿಗಳು ಹೇಳುತ್ತಾರೆ.
ಹೌದು, ಕಾಟೇರಮ್ಮ ತಾಯಿ ದೇವಸ್ಥಾನಕ್ಕೆ ಒಂದು ಸಾರಿ ಭೇಟಿ ನೀಡಿದರೆ ನಿಮ್ಮ ಕಷ್ಟವೆಲ್ಲ ಪರಿಹಾರವಾಗುತ್ತದೆ ಎಂದು ಇಲ್ಲಿ ಭೇಟಿ ನೀಡುವ ಭಕ್ತಾದಿಗಳು ಹೇಳುತ್ತಾರೆ.
9 ಶುಕ್ರವಾರ ಕಾಟೇರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ 9 ವಾರ ಕೂಡ ಆಲದ ಮರಕ್ಕೆ ತೆಂಗಿನಕಾಯಿ ಕಟ್ಟುವುದರಿಂದ ನಾವು ಬೇಡಿಕೊಂಡ ಬೇಡಿಕೆಯಲ್ಲ ಈಡೇರುತ್ತದೆ.
ನಮಗೆ ಏನೇ ಕಷ್ಟ ಬಂದರೂ ಪರಿಹಾರ ಆಗುತ್ತೆ. ನಮ್ಮ ಇಷ್ಟಾರ್ಥಗಳು ಏನೇ ಇದ್ದರೂ ಕೂಡ ಪೂರೈಸುತ್ತಾಳೆ ಈ ಕಾಟೇರಮ್ಮ ದೇವಿ.
ಮಾನವನಿಗೆ ಕಾಡುವಂತಹ ಎಲ್ಲಾ ಕಷ್ಟಗಳಿಗೆ ಕಾಟೇರಮ್ಮ ತಾಯಿ ಪರಿಹಾರ ನೀಡುತ್ತಾಳಂತೆ.
ಇನ್ನು ಶಕ್ತಿ ದೇವತೆ ಕಾಟೇರಮ್ಮ ದೇವಾಲಯಕ್ಕೆ ಪ್ರತಿ ಮಂಗಳವಾರ , ಶುಕ್ರವಾರ, ಹುಣ್ಣಿಮೆ , ಅಮಾವಾಸ್ಯೆ ದಿನಗಳಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ,
ತಮ್ಮ ಸಕಲ ಸಂಕಷ್ಟ ಪರಿಹಾರಕ್ಕೆ ಮತ್ತು ತಮ್ಮ ಇಚ್ಛೆಗಳನ್ನು ಶೀಘ್ರವಾಗಿ ಫಲಿಸಲು ಮತ್ತು ಪೂರೈಸಲು ದೇವಿಯನ್ನು ಆರಾಧಿಸಲು ಭಕ್ತರು ತಂಡೋಪ ತಂಡವಾಗಿ ದೇವಾಲಯಕ್ಕೆ ಬರುತ್ತಾರೆ,
ದೇವಾಲಯದ ಆವರಣದಲ್ಲಿರುವ ಬೃಹತ್ ಆಲದ ಮರಕ್ಕೆ ಕೆಂಪು ಬಣ್ಣದ ವಸ್ತ್ರದಲ್ಲಿ ತೆಂಗಿನಕಾಯಿ ಹರಿಶಿನ ಕುಂಕುಮ ಹರಕೆಯನ್ನು ಮರಕೆ ಕಟ್ಟಿ ತಮ್ಮ ಇಷ್ಟಾರ್ಥಗಳನ್ನು ದೇವಿಯ ಮುಖಾಂತರ ಪೂರೈಸಲು ಬೇಡಿಕೆಯನ್ನು ಸಲ್ಲಿಸುತ್ತಾರೆ. ಸಾವಿರಾರು ಮಹಿಳೆಯರು, ಅಮಾವಾಸ್ಯೆ, ಹುಣ್ಣುಮೆ, ಶುಕ್ರವಾರದಂದು, ಮಂಗಳವಾರ, ತಮ್ಮ ಇಷ್ಟ ಕಾಮನೆಗಳನ್ನು ಪೂರೈಸಿಕೊಳ್ಳಲು ದೇವಿಯ ಮೊರೆ ಹೋಗುತ್ತಾರೆ
*ಪ್ರತ್ಯಾಂಗಿರ ಹೋಮ*
ಕಲಿಯುಗದ ಅದಿದೇವತೆ ನರಸಿಂಹ ಅವತಾರದ ಪ್ರತ್ಯಾಂಗಿರ ದೇವಿಯ ಆರಾಧನೆ ಈ ಕ್ಷೇತ್ರದ ವಿಶೇಷ,
ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಲ್ಲಿ ಪ್ರತ್ಯಾಂಗಿರ ಹೋಮ ನಡೆಯುತ್ತದೆ, ನಮ್ಮ ಪೂರ್ವ ಜನ್ಮದ ಕರ್ಮಗಳು, ಮಾಟ-ಮಂತ್ರ, ಸಾಲ ಬಾಧೆ, ಶತ್ರು ಬಾಧೆ, ಹಿತಶತ್ರು ಬಾಧೆ, ಆರೋಗ್ಯದ ಸಮಸ್ಯೆಗಳು, ವ್ಯವಹಾರದಲ್ಲಿ ತೊಂದರೆ ಗಳು ಮನುಷ್ಯನ ಸಕಲ ಸಮಸ್ಯೆಗಳು ಸಹ ನಿವಾರಣೆ, ಪರಿಹಾರವಾಗಲು ಈ ಯಾಗದಲ್ಲಿ ಪಾಲ್ಗೊಳ್ಳಬೇಕು,
ಜೊತೆಗೆ ಇನ್ನೊಂದು ವಿಶೇಷವೆಂದರೆ ಲಕ್ಷ್ಮೀಕುಬೇರ ಹೋಮ , ತೀರ್ಥ ಸ್ನಾನ, ತಾಯಿಯ ವಾಗ್ದಾನ, ಕುಡಿತ ಬಿಡಿಸುವುದು, ಎಲ್ಲವೂ ಸಹ ನಿರಂತರವಾಗಿ ನಡೆಯುತ್ತಿದೆ ,
*252 ಅಡಿಯ ಬೃಹತ್ ಪ್ರತ್ಯಾಂಗಿರ ದೇವಿ ವಿಗ್ರಹ*
ಈ ಕ್ಷೇತ್ರದಲ್ಲಿ ವಿಶ್ವದಲ್ಲೇ ಅತಿ ಎತ್ತರದ 252 ಅಡಿಯ ಪ್ರತ್ಯಾಂಗಿರ ದೇವಿ ವಿಗ್ರಹವು ನೆಲೆಗೊಳ್ಳಲು ಸಕಲ ಸಿದ್ದತೆಗಳು ನಡಯುತ್ತಿವೆ, ಕಾಮಗಾರಿಯು ಚುರುಕಾಗಿ ನಡೆಯುತ್ತಿದ್ದು, ಇನ್ನೂ ಎರಡುವರ್ಷಗಳಲ್ಲಿ ಪೂರ್ಣ ಗೊಳ್ಳುವ ನಿರೀಕ್ಷೆ ಇದೆ,
ಒಟ್ಟಾರೆ ಈ ಕ್ಷೇತ್ರಕ್ಕೆ ನಂಬಿ ಬಂದ ಭಕ್ತರನ್ನು ತನ್ನ ಮಕ್ಕಳಂತೆ ಮಡಿಲಿಗೆ ಕಟ್ಟಿಕೊಂಡು , ಸಕಲ ಕಷ್ಟಗಳಿಗೆ ಪರಿಹಾರ ನೀಡುತ್ತ ಬಂದಿರುವ ಕಲಿಯುಗದ ಅದಿದೇವತೆ ಕಾಟೇರಮ್ಮನ ಕ್ಷೇತ್ರಕ್ಕೆ ನೀವು ಒಮ್ಮೆ ಭೇಟಿ ನೀಡುತ್ತೀರಾ ಅಲ್ವಾ..??
ಶ್ರೀ ಕ್ಷೇತ್ರ ಕಂಬಳಿಪುರ ಕಾಟೇರಮ್ಮ ದೇವಿ ಶಕ್ತಿ ಪೀಠ
ಸೂಲಿಬೆಲೆ ಹೋಬಳಿ , ಹೊಸಕೋಟೆ ತಾಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ,
Phone number: 8867841758 / 6360562826
ಲೋಹಿತ್ ಹನುಮಂತಪ್ಪ ನ್ಯೂಸ್ 84 ಕನ್ನಡ ಹೊಸಕೋಟೆ, ಬೆಂಗಳೂರು
ಶ್ರೀ ಕ್ಷೇತ್ರ ಕಂಬಳಿಪುರ ಕಾಟೇರಮ್ಮ ದೇವಿ ಶಕ್ತಿ ಪೀಠ
ಸೂಲಿಬೆಲೆ ಹೋಬಳಿ , ಹೊಸಕೋಟೆ ತಾಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ,
ಸಂಪರ್ಕಿಸಿ: 8867841758 / 6360562826