ಮೈಸೂರು ೨೬ ಏಪ್ರಿಲ್ ೨೧: ಕೊರೋನಾ ಎರಡನೇ ಅಲೆ ಭಯಾನಕತೆಯನ್ನು ಸೃಷ್ಟಿಸಿದ್ದು , ಜನರು ಗುಂಪು ಗುಂಪಾಗಿ ಸೇರಬಾರದು ಎಂದು ಸರ್ಕಾರ ಜನರ ಆರೋಗ್ಯ ದೃಷ್ಠಿಯಿಂದ ಮಾರ್ಗಸೂಚಿ ಹೊರಡಿಸಿದೆ .
ಮದುವೆ ಸಮಾರಂಭಕ್ಕೆ ಕೇವಲ 50 ಜನರಿಗಷ್ಟೇ ಸೀಮಿತಗೊಳಿಸಿದೆ . ಅಂತೆಯೇ ಸರ್ಕಾರದ ಮಾತನ್ನು ಪಾಲಿಸಿದ ಮೈಸೂರಿನ ನವ ಜೋಡಿಯೊಂದು ಸರಳವಾಗಿಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಮದುವೆಗೆ ಆಗಮಿಸಿದ ಬಂಧು ಬಾಂಧವರಿಗೆ ಮಾಸ್ಕ್ ವಿತರಿಸಿ ಅಕ್ಷತೆ ಹಾಕಿಸಿಕೊಂಡು ಆಶೀರ್ವಾದ ಪಡೆದಿದ್ದಾರೆ . ಸಮಾಜ ಸೇವಕರಾದ ಕೆ.ಶಿವಪ್ಪ ಹಾಗೂ ತುಳಸಿ ಪ್ರಭ ಶಿವಪ್ಪರವರು ತಮ್ಮ ಮಗಳ ಮದುವೆಯನ್ನು ದಟ್ಟಗಳ್ಳಿ ನಿವಾಸದಲ್ಲಿ ಸರಳವಾಗಿ ಜಿಲ್ಲಾಡಳಿತ ನಿಯಮ ಪಾಲಿಸಿ ವಿವಾಹ ಮಾಡಿದ್ದಾರೆ . ಜನನಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಂ.ಕೆ.ಅಶೋಕ್ , ಪ್ರಧಾನ ಕಾರ್ಯದರ್ಶಿ ಸೌಮ್ಯ ಅವರ ಸಹಯೋಗದೊಂದಿಗೆ ಮದುವೆಗೆ ಬಂದ ಅತಿಥಿಗಳಿಗೆ ವಧು – ಎಸ್.ಪೂಜಾ ವರ – ಅನ್ವೇಷ್ ಮಾಸ್ಕ್ ವಿತರಿಸಿ ಅಕ್ಷತೆಯೊಂದಿಗೆ ಆಶೀರ್ವಾದ ಪಡೆದರು . ವಧುವಿನ ತಂದೆ ಕೆ.ಶಿವಪ್ಪ ತುಳಸಿ ಪ್ರಭ ವರನ ತಂದೆ ನಾಗರಾಜು ಮಂಜುಳ ವಧು , ವರರನ್ನು ಆಶೀರ್ವದಿಸಿದರು .
ಈ ವೇಳೆ ಸ್ಮಿತಾ ಸಂತೋಷ , ರಾಮದಾಸ್ , ಕುಮಾರಣ್ಣ ರಾಧ , ಅಶೋಕ್ , ಸೌಮ್ಯ , ಚಿನ್ನು , ನವೀನ್ ಕುಮಾರ್ , ಗೋಳ್ ನಾಗರಾಜು , ರಘು ನೂತನ ದಂಪತಿಗೆ . ಶುಭ ಕೋರಿದರು .